-
ಟೊಳ್ಳುಮೂಳೆ ಆರೋಗ್ಯ ಮಾಹಿತಿ - ಡಾ.ಶಿವಮೂರ್ತಿ ಎನ್ ಭಾಗ 2 - Osteoporosis in Kannda by Dr Shiva Murthy N - Part 2
- 2022/06/29
- 再生時間: 22 分
- ポッドキャスト
-
サマリー
あらすじ・解説
ಟೊಳ್ಳು ಮೂಳೆ (ಆಸ್ಟಿಯೋಪೋರೋಸಿಸ್) Part 2... Continued from previous episode. Dont miss to listen to earlier episode. ನಮ್ಮ ಕ್ಲಿನಿಕ್ ಗೆ ಒಂದು ದೂರವಾಣಿ ಕರೆ ಬರುತ್ತದೆ. ಡಾಕ್ಟರ್ ನಮಸ್ಕಾರ. ನಾನು ನವೀನ್ ಅಂತ ಮಾತಾಡ್ತಾ ಇರೋದು. ನಮ್ಮ ಅಜ್ಜಿಗೆ ಸುಮಾರು 70 ವರ್ಷ ವಯಸ್ಸು ಆಗಿರಬಹುದು. ಬಚ್ಚಲು ಮನೆಗೆ ಹೋಗಿದ್ದರು. ಸ್ವಲ್ಪ ಹೊತ್ತಿನ ನಂತರ ಜೋರಾಗಿ ಚೀರಾಟ ಕೇಳಿಸಿತು. ಹೋಗಿ ನೋಡಿದರೆ ಅವರು ಜಾರಿ ಬಿದ್ದಿದ್ದರು. ಪಾಚಿ ಕಟ್ಟಿತ್ತು ಅನ್ಸತ್ತೆ. ಆಯತಪ್ಪಿ ಸರಕ್ಕನೆ ಜಾರಿ ಕೆಳಗೆ ಬಿದ್ದರು. ಈಗ ಮೇಲೆ ಏಳಲು ತುಂಬಾ ಕಷ್ಟ ಪಡುತ್ತಿದ್ದಾರೆ. ಮನೆಯವರೆಲ್ಲ ಸೇರಿ ಅವರನ್ನು ಮಂಚದ ಮೇಲೆ ಮಲಗಿಸಿದ್ದೇವೆ. ಅವರು ತೀವ್ರ ತರವಾದ ನೋವು ಅನುಭವಿಸುತ್ತಿದ್ದಾರೆ. ಹಾಸಿಗೆಯಿಂದ ಏಳುವುದು ಕಷ್ಟ ಆಗುತ್ತಿದೆ. ದಯವಿಟ್ಟು ಒಮ್ಮೆ ಬಂದು ನೋಡುವಿರಾ? ನಾನು ಅವರ ಕರೆಗೆ ಓಗೊಟ್ಟು ಹೋಗಿ ನೋಡಿದಾಗ ಅಜ್ಜಿಯ ಸೊಂಟದ ಮೂಳೆ ಮುರಿದಿರುವುದು ಗೊತ್ತಾಯಿತು. ನವೀನ್ ಅವರಿಗೆ ಹೇಳಿದರೂ ನಂಬಿಕೆ ಬರಲಿಲ್ಲ. ಅಜ್ಜಿ ಚೆನ್ನಾಗಿಯೇ ಇದ್ದರು. ಅಷ್ಟು ಸುಲಭವಾಗಿ ಹೇಗೆ ಮುರಿಯುತ್ತದೆ? ಎಂಬುದು ಅವರ ಪ್ರಶ್ನೆ. ಮುಂದೆ ಆಗಬಹುದಾದ ತೊಂದರೆಗಳು, ಆರ್ಥಿಕ ಹೊರೆ, ರೋಗಿಯ ದೈನಂದಿನ ಜೀವನದ ಮೇಲೆ ಆಗಬಹುದಾದ ಪರಿಣಾಮಗಳನ್ನು ನೀವು ಊಹಿಸಿಕೊಳ್ಳಬಹುದು. ಈ ತರಹ ಮುರಿದ ಮೂಳೆಯಿಂದ ರೋಗಿ ತಿಂಗಳು ಗಟ್ಟಲೆ ಹಾಸಿಗೆ ಹಿಡಿದು ಮಲಗಬೇಕಾಗುತ್ತದೆ. ಇವಕ್ಕೆಲ್ಲ ಕಾರಣ ಏನು ಎಂದು ಊಹಿಸುವಿರಾ? ಅದೇ ಟೊಳ್ಳು ಮೂಳೆ, ಅಥವಾ ಮೆದು ಅಸ್ತಿ, ಅಥವಾ ರಂದ್ರಮೂಳೆ (ಆಸ್ಟಿಯೋಪೋರೋಸಿಸ್ ಅಥವಾ ಅಸ್ತಿರಂದ್ರತೆ). ಹಾಗಾದರೆ ಈ ಟೊಳ್ಳು ಮೂಳೆಯ ಬಗ್ಗೆ ತಿಳಿಯೋಣ ಬನ್ನಿ. ಡಾ. ಶಿವಮೂರ್ತಿ ಎನ್, ಔಷಧಶಾಸ್ತ್ರಜ್ಙರು ಡಾ. ಶಿವಮೂರ್ತಿ ಎನ್ ಅವರು, ವೃತ್ತಿಯಲ್ಲಿ ವೈದ್ಯರು ಮತ್ತು ಔಷಧಶಾಸ್ತ್ರಜ್ಙರು. ತಮ್ಮ ೨೦ ವರ್ಷದ ವೃತ್ತಿ ಜೀವನದಲ್ಲಿ ಹಲವಾರು ಉತ್ತಮ ಸಂಸ್ಥೆಗಳಲ್ಲಿ ಜವ್ವಬ್ದಾರಿಯುತ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ. ಔಷಧಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿಯಲ್ಲಿ ರಾಜಿವ್ ಗಾಂಧಿ ವೈಧ್ಯಕೀಯ ವಿಶ್ವವಿಧ್ಯಾಲಯದಲ್ಲಿ ಮೊದಲ ರಾಂಕ್ ಪಡೆದು ಉತ್ತೀರ್ಣರಾದ ನಂತರ ಸಂತ ಜಾನ್ ವೈದ್ಯಕೀಯ ಕಾಲೇಜು ಬೆಂಗಳೂರು, ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು, ಪಾಂಡಿಚೆರಿ, ಡಾ. ಮೂಪೆನ್ ವಯನಾಡು ವೈದ್ಯಕೀಯ ಕಾಲೇಜು, ವಯನಾಡು ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಈಗ, ಡಾ. ಚಂದ್ರಮ್ಮ ದಯಾನಂದ ವೈದ್ಯಕೀಯ ಮಹಾವಿಧ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಇಲ್ಲಿ ಸಹ ಪ್ರಾಧ್ಯಾಪಕರಾಗಿ ಔಷಧಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬರೆದು ಹಾಡಿದ ಕ್ಷಯರೋಗ ಮಾಹಿತಿ ಉಳ್ಳ ಜಾನಪದ ಶೈಲಿಯ ಹಾಡಿಗೆ ಕಾಲೇಜು ಮಟ್ಟದಲ್ಲಿ ಎರಡನೇ ಪ್ರಶಸ್ತಿ ದೊರೆತಿದೆ. ಅವರು ಬರೆದು, ನಿರ್ದೆಶನ ಮಾಡಿದ ಇಂಗ್ಲೀಷ್ ಕಾರ್ಟೂನ್ "...